Visitors Book

ವೀಣಾ ದೊರೆಸ್ವಾಮಿ ಅಯ್ಯಂಗಾರ್
ವೀಣಾ ದೊರೆಸ್ವಾಮಿ ಅಯ್ಯಂಗಾರ್

..೧೯೮೬
ಮೈಸೂರು ಅಸೋಸಿಯೇಷನ್ ಆಚರಿಸಿದ ವಜ್ರಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನನಗೆ ದೊರಕಿದ್ದಕ್ಕಾಗಿ ಮನಸ್ಸಿಗೆ ಅತ್ಯಂತ ಆನಂದ ಹಾಗೂ ತೃಪ್ತಿಯಾಗಿದೆ. ಈ ಸಂಸ್ಥೆಯು ವೃದ್ಧಿಯಾಗಿ ಇಂತಹ ಅನೇಕ ಸಂದರ್ಭಗಳನ್ನು ಕಾಣಲೆಂದು ಹೃತ್ಪೂರಕವಾಗಿ ಹಾರೈಸುತ್ತೇನೆ. ಕೃತಜ್ಞತೆಗಳು

ಉದಯಕುಮಾರ್, ಚಿತ್ರ ನಟ
ಉದಯಕುಮಾರ್, ಚಿತ್ರ ನಟ

೨೭..೧೯೭೫
ನಾಡ ನುಡಿ, ನಾಡ ಜನ, ನಾಡ ಕಾರ್ಮಿಕರು, ಕೌಶಲ್ಯಪರಿಪೂರ್ಣರು, ಬುದ್ಧಿಜೀವರುಗಳ ಸುಗಮವನ್ನು ಸಂದರ್ಶಿಸುವ ಮಹಾಭಾಗ್ಯ ಈ ದಿನದಿಂದ ಆಯಿತು. ಸುಮಾರು ೫೦ ವರ್ಷಗಳ ಹಿಂದೆ ಈ ಪವಿತ್ರ ಸಂಘ ಮಹಾರಾಜರ ಅಮೃತಹಸ್ತದಿಂದ ಪ್ರಾರಂಭವಾಗಿ – ಬಂಗಾರದ ಉತ್ಸವಕ್ಕೆ ಪೂರ್ವಭಾವಿಯಾಗಿ ನಾನು ಬಂದೆ – ಅಚ್ಚುಕಟ್ಟಿನ ಕಟ್ಟುಪಾಡಿನ ಕೂಡಿ ಬಾಳುವ ಈ ನವೋದಯ ಸಂಘದ ಪತಿ ವಿಷಯವೂ ಶ್ಲಾಘನೀಯ, ಅವರ್ಣೇಯ, ಸೌಜನ್ಯತೆಯ ಆಗರದ ಈ ಕರ್ಮಭೂಮಿಗೆ ತನ್ನತನವನ್ನ ಪುರೋತತ್ವದ ಪೌರೋಹಿತ್ಯ ವಹಿಸಿಕೊಂಡಿರುವ ಪ್ರತಿಕಾರ್ಯಕರ್ತರಿಗೂ, ಸದಸ್ಯರಿಗೂ ಭುವನೇಶ್ವರಿ ಸರ್ವಶಕ್ತಿಯನ್ನು ಅನುಗ್ರಹಿಸಲಿ. ಆಶೀರ್ವದಿಸಲಿ.

 

ಇರುವ ಸದಸ್ಯರ ಬ್ಯಾಂಕು ಪ್ರಾರಂಭವಾಗಲಿ. ಅವರ ಹಣ ದೀನ ದಲಿತರ ದೇವರಾಗಲಿ – ತನ್ನ ಅವಸರಕ್ಕೆ ಅಕ್ಕರೆಯ ಸಹಾಯ ಇದರಿಂದಾಗಲಿ. ಒಂದು ರೂ, ಒಬ್ಬ ಸದಸ್ಯರ ಕಾಣಿಕೆ – ಮುಖ್ಯವಾಗಿ ಮಾಡುವಿರೆಂದು ನಂಬಿರುವೆ.

ಯೂ.ಆರ್.ಅನಂತಮೂರ್ತಿ
ಯೂ.ಆರ್.ಅನಂತಮೂರ್ತಿ

೧೬..೧೯೯೯
ಮೈಸೂರಿನ ಸಂಸ್ಕೃತಿ ಮೈಸೂರಿನಲ್ಲಿ ಮಾಯವಾದರೂ, ಇಲ್ಲಿ ಮುಂಬಯಿಯಲ್ಲಿ ಅದು ಮುಂದುವರಿಯಬಹುದೆಂಬ ಭರವಸೆ ನನ್ನಲ್ಲಿ ಮೂಡಿದೆ. ಒಟ್ಟು ಕಟ್ಟಡದ ಸ್ವರೂಪವೇ ನನಗೆ ಪ್ರಿಯವಾ್ಯಿತು. ಮೈಸೂರಿನಿಂದ ವಿದ್ಯೆ ಪಡೆದು ಹೊರದೇಶಗಳಲ್ಲಿ ನೆಲೆಸಿದರೂ, ಹೀಗೆ ತನ್ನ ಹುಟ್ಟಿನ ಊರಿನ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದನ್ನೂ, ಅದನ್ನು ಒಂದು ಕಟ್ಟಡವಾಗಿ, ಒಂದು ಸಂಸ್ಥೆಯಾಗಿ, ಒಂದು ನಾಟಕದ ಚಳುವಳಿಯಾಗಿ ಬೆಳಸಿಕೊಂಡದ್ದನ್ನೂ ನಾನು ಕಂಡಿಲ್ಲ. ಹಿಂದಿನ ಮೈಸೂರು, ಕರ್ನಾಟಕಕ್ಕೆ ಒಂದು, ಆಧುನಿಕ ವಿದ್ಯಾವಂತ ಮಧ್ಯಮವರ್ಗವನ್ನು ಕೊಟ್ಟಿತು. ಈ ವರ್ಗದ ಜನ ಕರ್ನಾಟಕದಲ್ಲಿ ಕ್ರಿಯಾಶೀಲರಾಗಿರುವಂತೆ, ಅದಕ್ಕೂ ಕೊಂಚ ಮಿಗಿಲಾಗಿ ಮುಂಬಯಿಯಲ್ಲಿ ಕ್ರಿಯಾಶೀಲರಾಗಿರುವುದು ಸ್ತುತ್ಯರ್ಹವಾದದ್ದು. ಮುಂಬಯಿಯ ವಾತಾವರಣವೂ ಇದಕ್ಕೆ ಎಷ್ಟು ಕಾರಣ ಎಂಬುದನ್ನು ಚಿಂತಿಸಬೇಕು. ಮುಂಬಯಿ ಒಂದು ಮಹಾನಗರ. ಭಾರತದಲ್ಲೇ ಹೆಚ್ಚು ಆಧುನಿಕವಾದ ನಗರ. ಈ ಆಧುನಿಕತೆ ನಮ್ಮ ಸಂಸ್ಕೃತಿಯ ವಿಶಿಷ್ಟತೆಗಳನ್ನು ನೂಕಿ ಹಾಕಬಲ್ಲದೆಂಬ ಅನುಮಾನ ಸಹಜವಾದದ್ದು. ಆದರೆ ಈ ಮಹಾನಗರದ ಆಧುನಿಕತೆಯಲ್ಲಿ ಕನ್ನಡ ಉಳಿದು ಬೆಳೆದು ಬಂದಿರುವುದು ಒಂದು ಪವಾಡವೇ ಸರಿ.

ಸಿಂಧುವಳ್ಳಿ ಅನಂತಮೂರ್ತಿ
ಸಿಂಧುವಳ್ಳಿ ಅನಂತಮೂರ್ತಿ

೧೩.೧೧.೭೫
ನಾನು ಬೊಂಬಾಯಿಗೆ ಬಂದು ಎರಡು ದಿನಗಳಾದವು. ಇಲ್ಲಿಗೆ ಈ ಸಂಜೆ ಬಂದ ಕೂಡಲೇ ಮೈಸೂರಿನಲ್ಲಿದ್ದಂತಾಯಿತು. ಕೂಡಲೇ ಮೈಸೂರಿನವನಾಗಿಬಿಟ್ಟೆ. ಇಲ್ಲಿಯ ಚಟುವಟಿಕೆಗಳನ್ನು ಕೇಳಿ ಬಹಳವಾಗಿ ಮೆಚ್ಚಿಕೊಂಡೆ, ಅದರಲ್ಲೂ ನಾಟಕ ಹಾಗೂ ಪ್ರಯೋಗಗಳ ಬಗ್ಯೆ ಇವರಿಗಿರುವ ಆಸಕ್ತಿ ನನ್ನನ್ನು ಮುಗ್ಧನನ್ನಾಗಿ ಮಾಡಿದೆ. ಇವರೊಡನೆ ಚರ್ಚಿಸಿದಾಗ, ಕೆಲವು ಅಂಶಗಳ ಬಗ್ಯೆ ನನ್ನನ್ನೂ ವಿಚಾರ ಮಾಡುವಂತೆ ಮಾಡಿದ್ದಾರೆ.ಅದಕ್ಕೆ ಇವರನ್ನು ಅಭಿವಂದಿಸುತ್ತೇನೆ. ಒಳ್ಳೆ ಊಟ ಹಾಕಿದ್ದಕ್ಕೆ ಮತ್ತೊಮ್ಮೆ ವಂದಿಸುತ್ತೇನೆ.

ಶ್ರೀನಾಥ್ , ಚಿತ್ರ ನಟ
ಶ್ರೀನಾಥ್ , ಚಿತ್ರ ನಟ

೧೭.೧೧.೭೬
ಬೊಂಬಾಯಿಯಲ್ಲಿ ನಮ್ಮವರನ್ನು ಭೇಟಿ ಮಾಡುವ ಸಂದರ್ಭ ಒದಗಿದ್ದಕ್ಕೆ ಅತ್ಯಂತ ಆನಂದವಾಗಿದೆ. ಸಂಘದ ಸದಸ್ಯರ ಸ್ನೇಹಭಾವ ನನ್ನನ್ನು ಆಕರ್ಷಿಸಿದೆ. ಸಂಘಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು.

ಶಿವರಾಮ ಕಾರಂತ
ಶಿವರಾಮ ಕಾರಂತ

..೧೯೮೪
ಮೈಸೂರು ಅಸೋಸಿಯೇಷನ್ ಆಶ್ರಯದಲ್ಲಿ ಮೂರು ಉಪನ್ಯಾಸಗಳನ್ನು ಮಾಡಲು ಬಂದ ನಾನು ಇಲ್ಲಿಯ ಹೃದನ್ವಾದ ಪ್ರೀತಿ, ಆದರ, ಸ್ನೇಹಗಳನ್ನು ಸಂಪಾದಿಸಿ, ಹೆಮ್ಮೆಚಿತ್ತನಾಗಿ ಮರಳುತ್ತಿದ್ದೇನೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು.

ರಂಗನಾಥ ದಿವಾಕರ
ರಂಗನಾಥ ದಿವಾಕರ

೨೦..೧೯೭೬
I spent a very lively evening with my friends at Mysore Association today. The Association is celebrating its golden jubilee and it is naturally a proud day as one remembers the past achievements on such an occasion. Now that we have Karnatak as a unit and integral part of India, we may not be rest satisfied with the love and projecting of our language and literature alone. Karnataka in all its aspects may be not only a matter for our study but here in Bombay or task is to project it to others. I am sure some of us here are quite competent to do it in a manner I suggested while giving a brief talk.

ಆರ್.ಗುಂಡುರಾವ್
ಆರ್.ಗುಂಡುರಾವ್

೨೪.೧೦.೧೯೭೬
I am very happy to hear that this association taking keen interest in sports and cultural activities. I wish them all success

ಪಿ.ಬಿ.ಶ್ರೀನಿವಾಸ್
ಪಿ.ಬಿ.ಶ್ರೀನಿವಾಸ್

..೧೯೮೦
ಮುಂಬೈಯಲ್ಲಿ ಮೈಸೂರಿನ ವಾತಾವರಣವನ್ನು ನೋಡಿದಾಗ ತುಂಬಾ ಸಂತೋಷವಾಯಿತು. ಈ ಸಂಸ್ಥೆಯು ಕಲಾ ಕಾರ್ಯಕ್ರಮಗಳಲ್ಲಿ ತೋರುತ್ತಿರುವ ಉತ್ಸಾಹ ಪ್ರಶಂಸನೀಯವೇ ಸರಿ! ಹೃತ್ಪೂರ್ವಕವಾಗಿ ನನ್ನನ್ನು ಸ್ವಾಗತಿಸಿದ ಒಳ್ಳೆಯ ಹೃದಯಗಳಿಗೆ ನನ್ನ ಹಾರ್ದಿಕ ಕ್ರುತಜ್ಞತಾಭಿವಂದನೆಗಳು.

ಎಂ.ವಿ.ಸೀತಾರಾಮಯ್ಯ (’ರಾಘವ’)
ಎಂ.ವಿ.ಸೀತಾರಾಮಯ್ಯ (’ರಾಘವ’)

೧೯..೧೯೮೬

ವೆಂಕಣ್ಣಯ್ಯ ಜನ್ಮ ಶತಮಾನೋತ್ಸವ ಉಪನ್ಯಾಸ ಸಂಬಂಧದಲ್ಲಿ ಮೈಸೂರು ಅಸೋಸಿಯೇಷನ್ನಿಗೆ ಭೇಟಿ ಕೊಟ್ಟದ್ದು, ಉಪನ್ಯಾಸ ಮಾಡಿದ್ದು, ಸೊಗಸಾದ ಮೈಸೂರು ರುಚಿಯ ಊಟ ಮಾಡಿದ್ದು, ಬದುಕಿನ ಮರೆಯಲಾಗದ ನೆನಪುಗಳಲ್ಲಿ ಒಂದಾಗಿ ಉಳಿಯುತ್ತದೆ.

ಕೆ.ಎಸ್.ಅಶ್ವಥ್
ಕೆ.ಎಸ್.ಅಶ್ವಥ್

೨೧.೧೦.೧೯೭೬

ಈ ಸಂಜೆ ಈ ಸಂಘಕ್ಕೆ ಭೇಟಿ ಕೊಟ್ಟು ಎಲ್ಲಾ ಚಟುವಟಿಕೆಗಳ ವಿವರ ತಿಳಿದುಕೊಂಡೆ. ಈ ಸಂಸ್ಥೆ ಮಹತ್ತರವಾಗಿ ಸಾಧಿಸಿದ್ದನ್ನು ಮನಗಂಡೆ. ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ಸದಾಕಾಲ ಈ ಸಂಸ್ಥೆಗಿರಲಿ.

ಹಂ.ಪ.ನಾಗರಾಜಯ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
ಹಂ.ಪ.ನಾಗರಾಜಯ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು

೨೭-೧೨-೭೮
ಮುಂಬಯಿಯಲ್ಲಿರುವ ಈ ಮೈಸೂರು ಸಂಘಕ್ಕೆ ಈ ದಿನ ಸಂಜೆ ಸಂದರ್ಶಿಸಿ ತುಂಬ ಸಂತೋಷಪಟ್ಟಿದ್ದೇನೆ. ಇಲ್ಲಿಯ ಸದಸ್ಯರು ಕಳೆದ ಅರ್ಧ ಶತಮಾನದಿಂದ ಮುಂಬಯಿಯಲ್ಲ್ಲಿ ಕನ್ನಡದ ವಾತಾವರಣ ಅಳಿಯದಂತೆ ಉಳಿಸಿಕೊಂಡು ಬಂದಿರುವ ಸಂಗತಿ ಅಭಿನಂದನೀಯವಾಗಿರುವಂತೆ ಸ್ಮರಣೀಯವೂ ಆಗಿದೆ. ತನ್ನ ಹಿಂದಿನ ಪರಂಪರೆಯನ್ನು ಅವಿಚ್ಛಿನ್ನವಾಗಿ ಮುಂದುವರಿಸಿಕೊಂಡು ಹೋಗಲು ಈಗಿನ ಸದಸ್ಯರೂ ಪ್ರಾಂಜಲವಾಗಿ ಪ್ರಯತ್ನಿಸುತ್ತಿರುವುದು ಹರ್ಷದ ಮಾತು. ಸಾಹಿತ್ಯ, ಸಂಸ್ಕೃತಿ, ಕಲೆ- ನಾಟಕ, ವಿವಿಧ ಆಟಗಳು, ಹೀಗೆ ಬದುಕಿಗೆ ಬೇಕಾದ ಎಲ್ಲ ಅಂಗ – ರಂಗಗಳ ವಿಕಸನಕ್ಕೆ ತಕ್ಕ ಭೂಮಿಕೆ-ವೇದಿಕೆ ಒದಗಿಸಿ ಈ ಸಂಸ್ಥೆ ಮಾಡಿರುವ, ಮಾಡುತ್ತಿರುವ ಮಹದುಪಕಾರ ಚಿರಸ್ಮರಣೀಯ

ಕೃಷ್ಣಾ ಹಾನಗಲ್ & ಗಂಗೂಬಾಯಿ ಹಾನಗಲ್, ಹಿಂದೂಸ್ತಾನಿ ಸಂಗೀತ ವಿದುಷಿ
ಕೃಷ್ಣಾ ಹಾನಗಲ್ & ಗಂಗೂಬಾಯಿ ಹಾನಗಲ್, ಹಿಂದೂಸ್ತಾನಿ ಸಂಗೀತ ವಿದುಷಿ

೮೬

ಮೈಸೂರು ಅಸೋಸಿಯೇಷನ್ ವಜ್ರ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಂಗೀತ ಮಹೋತ್ಸವದಲ್ಲಿ ಭಾಗವಹಿಸಲು ಆಮಂತ್ರಣ ನೀಡಿದ್ದಕ್ಕೂ ಮತ್ತು ಈ ಸಂಸ್ಥೆಯು ಹಮ್ಮಿಕೊಂಡಿರುವ ಕೆಲಸದ ಬಗ್ಗೆಯೂ ನನಗೆ ಅತೀವ ಆನಂದವಾಗಿದೆ. ಈ ಸಂಸ್ಥೆ ಅತಿಶಯ ಉತ್ತರೋತ್ತರ ಅಭಿವೃದ್ಧಿ ಪಡೆಯಲಿ ಎಂದು ಇಚ್ಛಿಸುತ್ತೇನೆ.

मैसूर असॊसियॆषनच्य हीर मॊहिमी निमित्त मला संगीत महॊत्सवात भाग घॆण्यासाठि आमंत्रित कॆल्या बद्दल व या संस्थॆचे भरीव कार्य बघून मला फ़ार संतॊष झाला. या संस्थॆचे उत्तरॊत्तर भर्भराट हॊवॊ , ही सदीच्छा

ಜಿ.ಎಸ್.ಶಿವರುದ್ರಪ್ಪ
ಜಿ.ಎಸ್.ಶಿವರುದ್ರಪ್ಪ

೧೯..೧೯೯೫

ಮುಂಬಯಿ ಮಹಾನಗರದಲ್ಲಿ ಕಳೆದ ಐವತ್ತು ವರ್ಷಗಳಿಂದ ಸ್ವತಂತ್ರ ಅಸ್ತಿತ್ವವನ್ನುಳ್ಳ “ಮೈಸೂರು ಅಸೋಸಿಯೇಷನ್ ಎಂಬ ಈ ಸಾಂಸ್ಕೃತಿಕ ಸಂಸ್ಥೆಯು ತನ್ನ ಬಂಗಾರದ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಾನು, ಅದರ ಆಶ್ರಯದಲ್ಲಿ ಕುವೆಂಪು ಸಾಹಿತ್ಯವನ್ನು ಕುರಿತು ಈ ಎರಡು ದಿನಗಳ ಕಾಲ ವಿಶೇಷೋಪನ್ಯಾಸ ಮಾಡುವ ನೆಪದಲ್ಲಿ, ಇದರ ಕಾರ್ಯೋದ್ದೇಶಗಳನ್ನು ಕಂಡು ತುಂಬ ಸಂತೋಷಪಟ್ಟಿದ್ದೇನೆ. ಮುಂಬೈದಂಥ ಕನ್ನಡೇತರ ಪರಿಸರದಲ್ಲಿ, ಈ ನಗರದ ಹಾಗೂ ಹೊರಗಿನ ಕನ್ನಡಿಗರನ್ನು ಒಂದೆಡೆ ಕೂಡಿಸುವ ಆಯಸ್ಕಾಂತ ಕೇಂದ್ರದಂತೆ ವರ್ತಿಸುತ್ತ, ’ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಕುವೆಂಪುವಾಣಿಯನ್ನು ನಿಜಮಾಡುತ್ತ, ನೆಲೆನಿಂತ ಈ ಸಂಘದ ಸಾಂಸ್ಕೃತಿಕ ಮಹತ್ವವನ್ನು , ಎಷ್ಟು ಅಭಿನಂದಿಸಿದರೂ ಕಡಿಮೆಯೆಂದೇ ತಿಳಿದಿದ್ದೇನೆ.

ಈ.ಏ.ಎಸ್. ಪ್ರಸನ್ನ
ಈ.ಏ.ಎಸ್.  ಪ್ರಸನ್ನ

Captain Karnataka Cricket Team

Tea has given sufficient clues about the organisation and has made us feel that we are in Karnataka for all practical Purpose

ಡಾ. ರಾಜಕುಮಾರ್
ಡಾ. ರಾಜಕುಮಾರ್

೬.೪.೭೮
ನಿಮ್ಮ ವಿಶ್ವಾಸಕ್ಕೆ
......

ನಮ್ಮ ಮೈಸೂರು ಸಂಘ ಚಿರಾಯುವಾಗಿ ಬೆಳಗಲಿ.

Dimple Khanna
Dimple Khanna

24/10/76

It has been my pleasure attending this function and been of any help to the Mysore Association.

ದೇ ಜವರೇಗೌಡ
ದೇ ಜವರೇಗೌಡ

೨೨..೧೯೮೬

ಮೈಸೂರು ಅಸೋಸಿಯೇಷನ್ ಹೆಸರು ಕೇಳಿದ್ದೆ. ಅದು ನಡೆಸುತ್ತಿರುವ ವ್ಯಾಪಕವೂ ಆಕರ್ಷದಾಯಕವೂ ಆದ ಕಾರ್ಯಕ್ರಮಗಳ ಬಗ್ಯೆ ತಿಳಿದುಕೊಂಡಿದ್ದೆ. ಈ ಎರಡು ದಿನಗಳು ನಾನೇ ಪ್ರತ್ಯಕ್ಷವಾಗಿ ಕಂಡು ಪುಳಕಗೊಂಡಿದ್ದೇನೆ. ಇಲ್ಲಿ ಕನ್ನಡ ಗೆದ್ದಿದೆ. ಕರ್ನಾಟಕದ ಕಂಪು ಪರಿಮಾಸುತ್ತಿದೆ. ಇಲ್ಲಿಯ ಕಾರ್ಯಕರ್ತರು ನಿಜಕ್ಕೂ ಅಭಿನಂದನಾರ್ಹರು. ಇಲ್ಲಿಯ ಯುವಕರ ಉತ್ಸಾಹ ಅಸದೃಶವಾದದ್ದೆಂಬುದನ್ನು ನಾನು ಅರಿತುಕೊಂಡಿದ್ದೇನೆ. ಅವರ ಉತ್ಸಾಹವೇ ಈ ಸಂಸ್ಥೆಯ ಜೀವಾಳವಾಗಿದೆ.

ಈ ಸಂಸ್ಥೆಯ ಇತಿಹಾಸವನ್ನು ಕೂಲಂಕುಷವಾಗಿ ಬರೆಯಿಸಿ, ದೇಶದಲ್ಲೆಲ್ಲಾ ಅದು ತಿಳಿಯುವಂತಾಗಲೆಂದು ಹಾರೈಸುತ್ತೇನೆ.

ಭೀಮಸೇನ ಜೋಷಿ
Bhimsen Joshi

ಮೈಸೂರ ಅಸೋಸಿಯೇಷನ್ ಈ ಸಂಸ್ಥೆಯ ಎಲ್ಲ ಜನರನ್ನು ಕಂಡು ತುಂಬಾ ಸಂತೋಷವಾಯಿತು. ಇದೇ ರೀತಿಯಿಂದ ಆನಂದ ವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ.