"ನೇಸರು" ಜಾಗತಿಕ 'ಕನ್ನಡ ಕವನ ಸ್ಪರ್ಧೆ' - 2016ರ ವಿಜೇತರರು.

 

ಪ್ರಥಮ ಬಹುಮಾನವನ್ನು ಚೈತ್ರಿಕ ಶ್ರೀಧರ್ ಹೆಗಡೆ, ಸಿದ್ಧಾಪುರ ಅವರ ಕವನ "ದಣಪೆಯ ಈಚೆ ಬದಿಗೆ", ದ್ವಿತೀಯ ಬಹುಮಾನವನ್ನು ಛಾಯಾ ಭಗವತಿ, ವಿಜಯನಗರ, ಬೆಂಗಳೂರು ಅವರ ಕವನ "ಅಪರೂಪಕೊಮ್ಮೊಮ್ಮೆ", ತೃತೀಯ ಬಹುಮಾನವನ್ನು ವೀಣಾ ಬಡಿಗೇರ್ ಅವರ ಕವನ "ಹೆಣ್ಣಾಗಬೇಕು", ಹಾಗೂ ಎರಡು ಪ್ರೋತ್ಸಾಹಕರ ಬಹುಮಾನವನ್ನು ಕ್ರಮವಾಗಿ ಶ್ರೀ ಗಣಪತಿ ದಿವಾಣ, ಉಡುಪಿ ಅವರ ಕವನ "ನಾನೊಬ್ಬ ಇದ್ದೇನೆ", ಹಾಗೂ ಶ್ರೀ ರಾಮಚಂದ್ರ ಪೈ, ಮೂಡುಬಿದಿರೆ, ದ.ಕ ಜಿಲ್ಲೆ ಅವರ "ಎಲೆ ಎಲೆಯ ಎದೆಯ ದನಿ" ಕವನಕ್ಕೆ ನೀಡಲಾಯಿತು. ಜಾಗತಿಕ "ನೇಸರು" 'ಕನ್ನಡ ಕವನ ಸ್ಪರ್ಧೆ'ಯ ತೀರ್ಪುಗಾರರಾಗಿ ಮುಂಬೈಯ ಖ್ಯಾತ ಕವಿ ಡಾ. ಬಿ. ಎಸ್. ಕುರ್ಕಾಲ್, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಹಾಗೂ ನಾಡಿನ ಖ್ಯಾತ ಕವಿ, ಲೇಖಕರಾದ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಅವರು ಸಹಕರಿಸಿದರು.