"ನೇಸರು ಜಾಗತಿಕ ಕನ್ನಡ ಸಣ್ಣ ಕತೆ ಸ್ಪರ್ಧೆ"

Announcement Text
ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ೧೨೭ನೇ ಜನ್ಮದಿನೋತ್ಸವದ ನೆನಪಿನಲ್ಲಿ ಮೈಸೂರು ಅಸೋಸಿಯೇಷನ್ ಮುಂಬೈಯು "ನೇಸರು ಜಾಗತಿಕ ಕನ್ನಡ ಸಣ್ಣ ಕತೆ ಸ್ಪರ್ಧೆ"ಯನ್ನು ಆಯೋಜಿಸುತ್ತಿದೆ. ಇದರಲ್ಲಿ ವಿಶ್ವದ ಎಲ್ಲ ಕನ್ನಡ ಲೇಖಕರೂ ಭಾಗವಹಿಸಬಹುದಾಗಿದೆ. ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ವಿಷಯದ ನಿರ್ಬಂಧವು ಇಲ್ಲ.