ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು 
 
ಇದೇ  ಬರುವ ರವಿವಾರ ೨೪. ೦೧. ೨೦೧೬ ರಂದು ಸಂಜೆ ೬.೦೦ ರಿಂದ ೯.೩೦ ರವರೆಗೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕವರನ್ನು ಮೈಸೂರು ಅಸೋಸಿಯೇಶನ್ ಆಯೋಜಿಸುತ್ತಿದೆ. ಅಂದು ಮುಂಬಯಿಯ ಕನ್ನಡ ಶಾಲೆಗಳು ಭಾಗವಹಿಸುವವರಿದ್ದಾರೆ. ಸಾಧಾರಣ ೬-೧೦ ಮಕ್ಕಳ ತಂಡ ೩೦ ನಿಮಿಷಗಳ ಅವಧಿಯ ಗೀತೆ ಅಥವಾ ನೃತ್ಯ ಇಲ್ಲವೇ ಪುಟ್ಟ ನಾಟಕ ಮುಂತಾಗಿ ಕಾರ್ಯಕ್ರಮ ನೀಡಲು ಅವಕಾಶವಿದೆ. ಹೆಚ್ಚು ಮಕ್ಕಳಾದರೂ ಆಗಬಹುದು. ಒಂದು ವೇಳೆ ಸಮೂಹ ಕಾರ್ಯಕ್ರಮ ಸಾಧ್ಯವಿಲ್ಲದಿದ್ದರೆ ಎರಡು ಅಥವಾ ಮೂರು ಮಕ್ಕಳು, ಒಬ್ಬೊಬ್ಬರೇ ಗೀತೆ ಅಥವಾ ನೃತ್ಯವನ್ನು ಸಾದರಪಡಿಸಬಹುದು. ಭಾಗವಹಿಸುವ ಮಕ್ಕಳ ಉಡುಪು, ಅಲಂಕಾರ ಅವರೇ ಹೊಂದಿಸಿಕೊಳ್ಳಬೇಕು. ಮಕ್ಕಳ ಹೋಗಿ ಬರುವ ಖರ್ಚು, ಜೊತೆಗೆ ಉಪಹಾರವನ್ನು ಅಸೋಸಿಯೇಷನ್ ಭರಿಸುವುದು. ಸಂಜೆ ಕಾರ್ಯಕ್ರಮ ಮುಗಿಯುವ ವೇಳೆ ತಡವಾಗುವುದರಿಂದ ಮಕ್ಕಳ ಪಾಲಕರು ಸಹ ಜೊತೆಯಲ್ಲಿ ಬರುವುದು ಅವಶ್ಯಕ. ಭಾಗವಹಿಸಿದ ಮಕ್ಕಳಿಗೆ ಮತ್ತು ಶಾಲೆಗೆ ಪ್ರಮಾಣಪತ್ರವನ್ನು ಮತ್ತು ಸ್ಮರಣಿಕೆಯನ್ನು ಕೊಡಲಾಗುವುದು. ಜೊತೆಗೆ ಪ್ರೋತ್ಸಾಹಧನವನ್ನೂ ಕೊಡಲಾಗುವುದು. 
ದಯವಿಟ್ಟು ನಿಮ್ಮ ಶಾಲೆಯ ಮಕ್ಕಳು ಭಾಗವಹಿಸುವ ಬಗ್ಗೆ ಎಲ್ಲ ವಿವರಗಳ ಸಹಿತ ನಮಗೆ ಇದೇ ತಿಂಗಳ ೧೫ ರ ಒಳಗೆ ಖಚಿತ ಉತ್ತರ ನೀಡಬೇಕೆಂದು ವಿನಂತಿ.