“ಜಾನಪದ ಜಾತ್ರೆ”

Sat, 24/11/2018 - 15:00
ಕನ್ನಡ - ಸಂಸ್ಕೃತಿ ಇಲಾಖೆ, ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ, ನಾಗ್ಪುರ್ ನೆರವಿನಲ್ಲಿ, ಮುಂಬಯಿಯ ಮೈಸೂರು ಅಸೋಸಿಯೇಷನ್, ನವಿ ಮುಂಬಯಿ ಕನ್ನಡ ಸಂಘ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯೊಡನೆ ಸೇರಿಕೊಂಡು ನವೆಂಬರ್ 24 ಮತ್ತು 25, 2018 ರಂದು, “ಜಾನಪದ ಜಾತ್ರೆ”ಯನ್ನು ಜರುಗಿಸುತ್ತಿದೆ. ಶನಿವಾರ ನವೆಂಬರ್ 24, 2018 ರಂದು ನವಿ ಮುಂಬಯಿ ಕನ್ನಡ ಸಂಘದಲ್ಲಿ, ಅಂತೆಯೇ ಭಾನುವಾರ ನವೆಂಬರ್ 25, 2018 ರಂದು ರಾಷ್ಟ್ರೀಯ ಕನ್ನಡ ಶಾಲೆ ವಡಾಲಾದಲ್ಲಿ ಈ ‘ಜಾನಪದ ಜಾತ್ರೆ’ ಜರುಗಲಿದೆ. ಹಗಲು 3.00 ಘಂಟೆಗೆ ಮೆರವಣಿಗೆ ಹೊರಟು, ಆ ಪ್ರದೇಶದಲ್ಲಿ ಕುಣಿಯುತ್ತಾ ಆಮೇಲೆ 5.00 ಘಂಟೆಯಿಂದ 8.00 ಘಂಟೆಯವರೆಗೆ ಎಲ್ಲಾ ಕುಣಿತಗಳ ಹಾಡುಗಳ ಪ್ರದರ್ಶನ ನಡೆಯುತ್ತದೆ. ಇದರಲ್ಲಿ *ಜಾನಪದ ಗಾಯನ *ತತ್ವಪದ *ಸುಗಮ ಸಂಗೀತ *ತೊಗಲುಬೊಂಬೆ *ಹುಲಿವೇಷ *ಪೂಜಾ ಕುಣಿತ *ಗಾರುಡಿಗೊಂಬೆ *ಕೀಲು ಕುದುರೆ *ಡೊಳ್ಳು ಕುಣಿತ *ಗೊರವರ ಕುಣಿತ *ನಗಾರಿ ವಾದನ ಮತ್ತು ಹಲವಾರು ಕುಣಿತಗಳಿರುತ್ತದೆ. ಈ ಎಲ್ಲಾ ಕಲಾವಿದರೂ ಕೂಡ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದಾರೆ. ಇವರ ಕುಣಿತಗಳನ್ನು ನೋಡುವ, ಹಾಡುಗಳನ್ನು ಕೇಳುವ ಒಂದು ಅಪೂರ್ವ ಅವಕಾಶ ಮುಂಬಯಿಗರಿಗೆ ದೊರೆಯಲಿದೆ. ಎಲ್ಲರಿಗೂ ನಲ್ಮೆಯ ಬರುವನ್ನು ಸಂಯೋಜಕರು ಕೋರುತ್ತಿದ್ದಾರೆ.